ಏಲೇಶ್ವರದ ಕೇತಯ್ಯ: ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣ ಹಾಗೂ ವಚನಕಾರ. ಗುಲ್ಬರ್ಗ ಜಿಲ್ಲೆಯ ಏಲೇಶ್ವರ ಅಥವಾ ಈಗಿನ ಏಲೇರಿ ಈತನ ಜನ್ಮಸ್ಥಳ. ಇವನ ಹೆಂಡತಿ ಸಾಯಿದೇವಿ, ಮಗ ಶಿವಣ್ಣ, ಮಗಳು ಶಿವಕ್ಕ. ಕೇತಯ್ಯ ವೀರಶೈವಾಚಾರದಲ್ಲಿ ಅತ್ಯಂತ ನಿಷೆವಿಯುಳ್ಳವನಾಗಿದ್ದ. ಈತ ರಾಜ ದಯಪಾಲಿಸಿದ ಲಿಂಗಮುದ್ರೆಯ ಭೂಮಿಯಲ್ಲಿ ವ್ಯವಸಾಯ ಮಾಡಿ ಉಪಜೀವನ ನಡೆಸುತ್ತಿದ್ದ. ಈತ ಭವಿಸಂಪರ್ಕವೇ ಇಲ್ಲದೆ ಇರಲು ಕೆಲವರು ವೀರಶೈವ ಸಂಪ್ರದಾಯ ದ್ರೋಹಿಗಳು ಇವನ ಕಣಜಕ್ಕೆ ಬೆಂಕಿಯನ್ನು ಹಾಕಿ ಉರಿಸಿಟ್ಟಾಗ 
ಬೆಂದ ಬೀಜವನ್ನೇ ಬಿತ್ತಿ ಬೆಳೆದನೆಂದೂ ತನ್ನನ್ನು ಕೊಲ್ಲಲು ಬಂದ ಕಟುಕರಿಗೆ ತನ್ನ ವಚನಗಳಮೂಲಕ ವೀರಶೈವಧರ್ಮ ಬೋದಿsಸಿ, ಅವರಿಗೆ ವೀರಶೈವದೀಕ್ಷೆ ಕೊಟ್ಟನೆಂದೂ ಕಥೆಯಿದೆ. 
ಈತ ಸು.200 ವಚನಗಳನ್ನು ಬರೆದಿದ್ದಾನೆ. ರಾಮೇಶ್ವರಲಿಂಗ ಅಥವಾ ಏಲೇಶ್ವರಲಿಂಗ ಎಂಬುದು ಇವನ ವಚನಗಳ ಅಂಕಿತ. ಭಕ್ತರಿಗೆ ಬಂiÀÄಕೆಯುಂಟೆ? ನಿತ್ಯಂಗೆ ಸಾವುಂಟೇ? ಸದ್ಭಕ್ತರಿಗೆ ಮಿಥ್ಯತಥ್ಯವುಂಟೇ? ಕೃತಕೃತ್ಯನಾದ ಠಾವಿನಲಿ ಪ್ರತ್ಯುತ್ತರಗೆಯ್ದಡೆ ಸತ್ಯ 

ಸದಾಚಾರಕ್ಕೆ ಹೊರಗೂ ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗದ ಆಣೆ ಎಂಬ ವಚನ ಇವನ ಶೈಲಿಗೆ ಉದಾಹರಣೆಯಾಗಿದೆ.     (ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ